ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅರ್ಜುನ್ ಸರ್ಜಾ ಸಂಬಂಧಿ ಪವನ್ ತೇಜಾ | Filmibeat Kannada

2017-12-13 1,525

Kannada Actor Arjun Sarja cousin Pavan Teja to make Sandalwood Debut through Kannada Movie 'Atharva'. The movie is directed by Arun.


ಅರ್ಜುನ್ ಸರ್ಜಾ ನಂತರ ಈಗಾಗಲೇ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಕನ್ನಡದ ಚಿತ್ರರಂಗದಲ್ಲಿ ನಟರಾಗಿದ್ದಾರೆ. ಇನ್ನು ಧ್ರುವ ಸರ್ಜಾ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾ ನೀಡಿದ್ದಾರೆ. ಆದರೆ ಇದೀಗ ಧ್ರುವ ಬಳಿಕ ಸರ್ಜಾ ಫ್ಯಾಮಿಲಿಯ ಮತ್ತೊಂದು ಕುಡಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದೆ. ಅರ್ಜುನ್ ಸರ್ಜಾ ಅವರ ಸಂಬಂಧಿ ಪವನ್ ತೇಜ್ ಈಗ ಸಿನಿಮಾ ಮಾಡುತ್ತಿದ್ದಾರೆ. ಸಂಬಂಧದಲ್ಲಿ ಅರ್ಜುನ್ ಸರ್ಜಾ ಪವನ್ ಅವರಿಗೆ ಸೋದರ ಮಾವ ಆಗಬೇಕು. ಇನ್ನು 'ಅಥರ್ವ' ಸಿನಿಮಾದ ಮೂಲಕ ಪವನ್ ತೇಜ್ ತಮ್ಮ ಸಿನಿಜರ್ನಿ ಆರಂಭಿಸುತ್ತಿದ್ದಾರೆ.ಪವನ್ ತೇಜ್ ಈಗಾಗಲೇ ಸಿನಿಮಾಗೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಅನೇಕ ನಾಟಕಗಳನ್ನು ಮಾಡಿ ನಟನೆಯ ಅನುಭವನ್ನು ಪಡೆದುಕೊಂಡಿದ್ದಾರೆ. ಇನ್ನು ತಮ್ಮ ಮೊದಲ ಸಿನಿಮಾವನ್ನು ಆಕ್ಷನ್ ಚಿತ್ರವಾಗಿ ಪವನ್ ಆಯ್ಕೆ ಮಾಡಿದ್ದಾರೆ. ಅರುಣ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 'ಅಥರ್ವ' ಎಂದರೆ ನರಸಿಂಹನ ಇನ್ನೊಂದು ಹೆಸರಂತೆ.

Videos similaires